2 Timothy 2

1
2:1 2 ತಿಮೊ. 1:2
ನನ್ನ ಮಗನೇ, ನೀನು ಕ್ರಿಸ್ತ ಯೇಸುವಿನಲ್ಲಿರುವ ಕೃಪೆಯಿಂದ
2:1 ಎಫೆ. 6:10
ಬಲಹೊಂದಿದವನಾಗು.
2ನೀನು ಅನೇಕ ಸಾಕ್ಷಿಗಳ ಮುಂದೆ ನನ್ನಿಂದ ಕೇಳಿದ ಉಪದೇಶವನ್ನು
2:2 ತೀತ 1:5
ಇತರರಿಗೆ ಬೋಧಿಸಲು ಶಕ್ತರಾದ, ನಂಬಿಗಸ್ತರಾದ ಜನರಿಗೆ ಅದನ್ನು ಒಪ್ಪಿಸಿಕೊಡು.

3
2:3 1 ತಿಮೊ 1:18; 2 ತಿಮೊ. 1:; 4:5
ಕ್ರಿಸ್ತ ಯೇಸುವಿನ ಒಳ್ಳೆಯ ಸೈನಿಕನಂತೆ ನನ್ನೊಂದಿಗೆ ಕಷ್ಟವನ್ನನುಭವಿಸು.
4ಯುದ್ಧಕ್ಕೆ ಹೋಗುವ ಸೈನಿಕನು ಲೋಕವ್ಯವಹಾರದಲ್ಲಿ ಸಿಕ್ಕಿಕೊಳ್ಳದೆ, ತನ್ನನ್ನು ಸೈನ್ಯದಲ್ಲಿ ಸೇರಿಸಿಕೊಂಡವನನ್ನು ಮೆಚ್ಚಿಸುವುದಕ್ಕಾಗಿ ಪ್ರಯಾಸ ಪಡುತ್ತಿರುವನಲ್ಲವೇ. 5ಇದಲ್ಲದೆ
2:5 1 ಕೊರಿ. 9:25
ಯಾವನಾದರೂ ಸ್ಪರ್ಧೆಯಲ್ಲಿ ಎದುರಾಳಿಯೊಡನೆ ಹೋರಾಡುವಾಗ ನಿಯಮದ ಪ್ರಕಾರ ಹೋರಾಡದಿದ್ದರೆ ಅವನಿಗೆ
2:5 2 ತಿಮೊ. 4:8
ಜಯಮಾಲೆಯು ದೊರಕುವುದಿಲ್ಲ.

6
2:6 1 ಕೊರಿ. 9:10; ಇಬ್ರಿ. 6:7; ಯಾಕೋಬ 5:7
ವ್ಯವಸಾಯದ ಹುಟ್ಟುವಳಿಯಲ್ಲಿ ಮೊದಲನೆಯ ಪಾಲು ಕಷ್ಟಪಟ್ಟ ಕೃಷಿಕನಿಗೆ ದೊರೆಯುತ್ತದೆ.
7ನಾನು ಹೇಳುವುದನ್ನು ಯೋಚಿಸು. ಕರ್ತನು ಎಲ್ಲಾದರಲ್ಲಿಯೂ ನಿನಗೆ ವಿವೇಕವನ್ನು ದಯಪಾಲಿಸುವನು.

8
2:8 ದಾವೀದನ ವಂಶದವನಾದ ಯೇಸು ಕ್ರಿಸ್ತನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟವನೆಂಬುದನ್ನು ಜ್ಞಾಪಕಮಾಡಿಕೋ; 1 ಕೊರಿ. 15:20
ಸತ್ತವರೊಳಗಿಂದ ಎಬ್ಬಿಸಲ್ಪಟ್ಟವನೂ
2:8 ಮತ್ತಾ 1:1
ದಾವೀದನ ವಂಶದವನೂ ಆಗಿರುವ ಯೇಸು ಕ್ರಿಸ್ತನನ್ನು ಜ್ಞಾಪಕಮಾಡಿಕೋ,
2:8 ರೋಮಾ. 2:16
ಇದೇ ನಾನು ಸಾರುವ ಸುವಾರ್ತೆ.
9ಇದರಲ್ಲಿ
2:9 2 ತಿಮೊ. 1:8, 12
ನಾನು ಕಷ್ಟವನ್ನನುಭವಿಸಿ ದುಷ್ಕರ್ಮಿಯಂತೆ
2:9 ಫಿಲಿ. 1:7
ಸಂಕೋಲೆಯಿಂದ ಬಂಧಿಸಲ್ಪಟ್ಟವನಾಗಿದ್ದೇನೆ.
2:9 2 ತಿಮೊ. 4:17; ಫಿಲಿ 1:13
ಆದರೆ ದೇವರ ವಾಕ್ಯಕ್ಕೆ ಬಂಧನವಿಲ್ಲ.
10ಆದಕಾರಣ ದೇವರು ಆರಿಸಿಕೊಂಡವರು ಸಹ ಕ್ರಿಸ್ತ ಯೇಸುವಿನಲ್ಲಿರುವ ರಕ್ಷಣೆಯನ್ನು
2:10 1 ಪೇತ್ರ 5:10
ನಿತ್ಯ ಮಹಿಮೆಯ ಸಹಿತವಾಗಿ ಹೊಂದಬೇಕೆಂದು
2:10 ಎಫೆ. 3:13; ಕೊಲೊ. 1:24; 1 ಕೊರಿ. 3:7
ನಾನು ಅವರಿಗೋಸ್ಕರ ಎಲ್ಲವನ್ನು ತಾಳಿಕೊಳ್ಳುತ್ತೇನೆ.

11
2:11 1 ತಿಮೊ. 1:15
ಈ ಮಾತು ನಂಬತಕ್ಕದ್ದಾಗಿದೆ, ಅದೇನೆಂದರೆ

<<
2:11 1 ಥೆಸ. 5:10; ರೋಮಾ. 6:8
ನಾವು ಆತನೊಡನೆ ಸತ್ತಿದ್ದರೆ
2:11 ಪ್ರಕ. 20:4
ಆತನೊಡನೆ ಜೀವಿಸುವೆವು,
12
2:12 2 ಥೆಸ. 1:4,5; ರೋಮಾ. 8:17; ಇಬ್ರಿ. 10:36; ಪ್ರಕ. 20:4
ಸಹಿಸಿಕೊಳ್ಳುವವರಾಗಿದ್ದರೆ
ಆತನೊಡನೆ ಆಳುವೆವು.
2:12 ಮತ್ತಾ 10:33; ಮಾರ್ಕ 8:38; 2 ಪೇತ್ರ 2:1; 1 ಯೋಹಾ 2:23
ನಾವು ಯೇಸುವಿನವರಲ್ಲವೆಂದು ಹೇಳಿದರೆ
2:12 ಮತ್ತಾ 7:23; 10:33; 25:12; ಲೂಕ 13:25
ಆತನು ನಮ್ಮನ್ನು ತನ್ನವರಲ್ಲವೆಂದು ಹೇಳುವನು.
13ನಾವು ಅಪನಂಬಿಗಸ್ತರಾಗಿದ್ದರೂ
2:13 1 ಕೊರಿ. 1:9
ಆತನು ನಂಬಿಗಸ್ತನಾಗಿಯೇ ಇರುವನು.
ಆತನು
2:13 ಅರಣ್ಯ. 23:19; ತೀತ 3:9
ತನ್ನ ಸ್ವಭಾವವನ್ನು ನಿರಾಕರಿಸಲು ಆಗುವುದಿಲ್ಲ.>>

ಅನುಮೋದಿತನಾದ ಸೇವಕನು

14ಈ ಸಂಗತಿಗಳನ್ನು ಸಭೆಯವರ ಜ್ಞಾಪಕಕ್ಕೆ ತರಬೇಕು. ಕೇಳುವವರಿಗೆ ಕೇಡನ್ನುಂಟುಮಾಡುವುದಲ್ಲದೇ, ಯಾವ ಪ್ರಯೋಜನಕ್ಕೂ ಬಾರದ ತರ್ಕ
2:14 1 ತಿಮೊ. 6:4; ವ. 23
ವಾಗ್ವಾದಗಳನ್ನು ಮಾಡಬಾರದೆಂದು, ಅವರಿಗೆ ದೇವರ ಸನ್ನಿಧಿಯಲ್ಲಿ ಖಂಡಿತವಾಗಿ ಹೇಳು.
15ನೀನು ದೇವರಿಗೆ ಯೋಗ್ಯನಾಗಿ ಕಾಣಿಸಿಕೊಳ್ಳುವುದಕ್ಕೆ ಪ್ರಯಾಸಪಡು. ಅವಮಾನಕ್ಕೆ ಗುರಿಯಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವನೂ ಆಗಿರು.

16
2:16 1 ತಿಮೊ. 6:20
ಪ್ರಾಪಂಚಿಕವಾದ ವ್ಯರ್ಥ ಹರಟೆ ಮಾತುಗಳಿಂದ
2:16 ತೀತ 3:9
ದೂರವಾಗಿರು, ಅವುಗಳಿಗೆ ಮನಸ್ಸುಕೊಡುವವರು ಹೆಚ್ಚೆಚ್ಚಾಗಿ ಭಕ್ತಿಹೀನರಾಗುವರು.
17ಅವರ ಮಾತು ಹುಣ್ಣುವ್ಯಾಧಿಯಂತೆ ಹರಡಿಕೊಳ್ಳುವುದು. ಅವರಲ್ಲಿ
2:17 1 ತಿಮೊ. 1:20
ಹುಮೆನಾಯನೂ ಪಿಲೇತನೂ ಇದ್ದಾರೆ.
18ಅವರು ಸತ್ಯಭ್ರಷ್ಟರಾಗಿ
2:18 1 ಕೊರಿ. 15:12
ಪುನರುತ್ಥಾನವು ಆಗಿಹೋಯಿತೆಂದು ಹೇಳುತ್ತಾ ಹಲವರ ನಂಬಿಕೆಯನ್ನು ಕೆಡಿಸುವವರಾಗಿದ್ದಾರೆ.

19ಆದರೂ ದೇವರ ಸ್ಥಿರವಾದ ಅಸ್ಥಿವಾರವು ನಿಲ್ಲುತ್ತದೆ. ಅದರ ಮೇಲೆ
2:19 ಅರಣ್ಯ. 16:5; ನಹೂ. 1:7; ಯೋಹಾ. 10:14, 27; 1 ಕೊರಿ. 8:3
<<ತನ್ನವರು ಯಾರೆಂಬುದನ್ನು ಕರ್ತನು ತಿಳಿದಿದ್ದಾನೆ>> ಎಂತಲೂ <<ಕರ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರು ದುರ್ಮಾರ್ಗತನವನ್ನು ಬಿಟ್ಟುಬಿಡಬೇಕು>> ಎಂತಲೂ ಲಿಖಿತವಾಗಿದೆ.

20
2:20 1 ತಿಮೊ. 3:15
ದೊಡ್ಡ ಮನೆಯಲ್ಲಿ ಬೆಳ್ಳಿ ಬಂಗಾರದ ಪಾತ್ರೆಗಳಲ್ಲದೆ, ಮರದ ಪಾತ್ರೆಗಳೂ, ಮಣ್ಣಿನ ಪಾತ್ರೆಗಳೂ ಇರುತ್ತವೆ. ಅವುಗಳಲ್ಲಿ
2:20 ರೋಮಾ. 9:21
ಕೆಲವನ್ನು ಉತ್ತಮವಾದ ಬಳಕೆಗೂ ಕೆಲವನ್ನು ಹೀನವಾದ ಬಳಕೆಗೂ ಬಳಸಲಾಗುತ್ತದೆ.
21
2:21 ಜ್ಞಾ. 25:4; ಯೆಶಾ. 52:11
ಹೀಗಿರಲಾಗಿ ಒಬ್ಬನು ಹೀನ ನಡತೆಯುಳ್ಳವರ ಸಹವಾಸವನ್ನು ಬಿಟ್ಟು ತನ್ನನ್ನು ಶುದ್ಧಮಾಡಿಕೊಂಡರೆ, ಅವನು ಉತ್ತಮವಾದ ಬಳಕೆಗೆ ಯೋಗ್ಯನಾಗಿರುವನು. ಅವನು ದೇವರ ಸೇವೆಗೆ ಪ್ರತಿಷ್ಠಿತನಾಗಿಯೂ, ಯಜಮಾನನಿಗೆ ಉಪಯುಕ್ತನಾಗಿಯೂ,
2:21 2 ತಿಮೊ. 3:17; ತೀತ 3:1
ಸಕಲ ಸತ್ಕ್ರಿಯೆಗಳನ್ನು ಮಾಡುವುದಕ್ಕೆ ಸಿದ್ಧನಾಗಿಯೂ ಇರುವನು.

22ನೀನು ಯೌವನದ ಮೋಹಗಳಿಗೆ ದೂರವಾಗಿರು. ಶುದ್ಧಹೃದಯವುಳ್ಳವರಾಗಿ ಕರ್ತನನ್ನು ಬೇಡಿಕೊಳ್ಳುವವರ ಸಂಗಡ ನೀತಿ, ನಂಬಿಕೆ, ಪ್ರೀತಿ ಮತ್ತು ಸಮಾಧಾನಗಳನ್ನು ಸಂಪಾದಿಸುವುದಕ್ಕೆ ಪ್ರಯಾಸಪಡು. 23
2:23 1 ತಿಮೊ. 6:4
ಮೂಢರ ಬುದ್ಧಿಹೀನರ ವಿಚಾರಗಳು ಜಗಳಗಳಿಗೆ ಕಾರಣವಾಗುತ್ತವೆಯೆಂದು ತಿಳಿದು ಅವುಗಳ ಗೊಡವೆಗೆ ಹೋಗಬೇಡ.

24
2:24 ಮತ್ತಾ 12:18
ಕರ್ತನ ಸೇವಕನು ಜಗಳವಾಡದೆ,
2:24 1 ಥೆಸ. 2:7
ಎಲ್ಲರ ವಿಷಯದಲ್ಲಿ ಸಾಧುವೂ,
2:24 1 ತಿಮೊ. 3:2
ಬೋಧಿಸುವುದರಲ್ಲಿ ಪ್ರವೀಣನ್ನೂ, ತಾಳ್ಮೆಯುಳ್ಳವನ್ನೂ
25ಎದುರಿಸುವವರನ್ನು
2:25 ಗಲಾತ್ಯ. 6:1; ತೀತ 3:2
ಸೌಮ್ಯತೆಯಿಂದ ತಿದ್ದುವವನೂ ಆಗಿರಬೇಕು.
2:25 ಅ. ಕೃ. 8:22
ಬಹುಶಃ ದೇವರು ಆ ಎದುರಿಸುವವರ ಮನಸ್ಸನ್ನು ತನ್ನ ಕಡೆಗೆ ತಿರುಗಿಸಿ
2:25 1 ತಿಮೊ. 2:4
ಸತ್ಯದ ಜ್ಞಾನವನ್ನು ಅವರಿಗೆ ಕೊಟ್ಟಾನು.
2:26 1 ತಿಮೊ. 3:7
ಸೈತಾನನ ಬಲೆಗೆ ಬಿದ್ದವರಾದ ಇವರು ಒಂದು ವೇಳೆ ತಪ್ಪಿಸಿಕೊಂಡು ದೇವರ ಚಿತ್ತವನ್ನು ಅನುಸರಿಸುವುದಕ್ಕೆ ಶಕ್ತರಾದಾರು.

26

Copyright information for KanULB